ರಾಜ್ಯದಲ್ಲಿ ಹೊಸದಾಗಿ ಎಫ್ಎಂ(FM) ಚಾನೆಲ್ ಆರಂಭಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ.
ಕೇಂದ್ರ ಸರ್ಕಾರವು ಎಫ್‌ಎಂ ರೇಡಿಯೋವನ್ನು (FM Radio) ವಿಸ್ತರಿಸುವ ಸಲುವಾಗಿ ದೇಶದಲ್ಲಿ 730 ಹೊಸದಾಗಿ ಎಫ್ಎಂ ಚಾನೆಲ್ ಆರಂಭಕ್ಕೆ ಅವಕಾಶ ಕಲ್ಪಿಸಿದೆ ಕರ್ನಾಟಕದಲ್ಲಿ 53 ಹೊಸ ಎಫ್ ಎಂ ಚಾನೆಲ್‌ಗಳು 16 ನಗರಗಳಲ್ಲಿ ಪ್ರಾರಂಭದ ಅವಕಾಶವನ್ನು ನೀಡಿದೆ.
ಈ ಮೊದಲು ರಾಜ್ಯದ ಕೆಲವು ಕಡೆ ಎಫ್‌ಎಂ ಚಾನೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ ಈಗ ಮತ್ತೆ 16 ನಗರಗಳಲ್ಲಿ ಎಫ್‌ಎಂ ಚಾನೆಲ್ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲೆಲ್ಲಿ ಹೊಸದಾಗಿ ಅವಕಾಶ
ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಉಡುಪಿ, ರಾಯಚೂರು, ಕೋಲಾರ, ಗದಗ, ದಾವಣಗೆರೆ, ಹಾಸನ, ವಿಜಯಪುರ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಚಿಕ್ಕಮಂಗಳೂರು, ನಗರಗಳಲ್ಲಿ ಹೊಸದಾಗಿ ಎಫ್‌ಎಂ ಚಾನೆಲ್‌ಗಳು ಪ್ರಾರಂಭವಾಗಲಿವೆ.
ಅದೇ ರೀತಿಯಲ್ಲಿ ದೇಶವ್ಯಾಪ್ತಿ 234 ಹೊಸ ನಗರಗಳಲ್ಲಿ 730 ಹೊಸದಾಗಿ ಎಫ್ಎಂ ಚಾನೆಲ್ ಅನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
Tags:
ಸುದ್ದಿ