ಪುಟ್ಟಗೌರಿಯ ಮದುವೆ, ಕನ್ನಡತಿ, ಧಾರಾವಾಹಿಗಳಲ್ಲಿ ಮತ್ತು ಕಾಂಗರೂ, ರಾಜಹಂಸ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ರಂಜನಿ ರಾಘವನ್ (Ranjani Raghavan) ಅವರು ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮ(social media)ದಲ್ಲಿ ಸಾಗರ್ ಭಾರಧ್ವಜ್ (Sagar Bharadwaj) ಎಂಬುವವರ ಜೊತೆಗಿನ ಫೋಟೋಕ್ಕೆ ಜೀವನ ಸಂಗಾತಿ, ನನ್ನ ಹುಡುಗ, ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ.
ಈ ಹಿಂದೆ ನೀಡಿದ ಸಂದರ್ಶನ ಒಂದರಲ್ಲಿ ರಂಜನಿ ಅವರು ಬೆಸ್ಟ್ ಫ್ರೆಂಡ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ಈಗ ಸಮಾಜದಲ್ಲಿ ಹಾಗೆ ಇರೋದು. ನಮಗೆ ಯಾರಾದರೂ ಬೆಸ್ಟ್ ಫ್ರೆಂಡ್ ಇದ್ರೆ ನಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿರುತ್ತಾರೆ ನಮಗೆ ಬೇಸಿಕ್ ಬೇಕಾಗಿರೋದು ಫ್ರೆಂಡ್ ಶಿಪ್ ಮತ್ತು ಒಡನಾಟ ಮಿಕ್ಕಿದ್ದೆಲ್ಲ ನಂತರ ಅಡ್ಜಸ್ಟ್ ಮಾಡಿಕೊಳ್ಳಬಹುದು ಈ ತರ ಇದ್ರೆ ಚೆನ್ನಾಗಿರುತ್ತೆ ಎಂದು ಹೇಳಿದ್ದರು.
ಸಾಗರ್ ಭಾರಧ್ವಜ್ (Sagar Bharadwaj) ಯಾರು ?
ಸಾಗರ್ ಭಾರದ್ವಾಜ್ ಅವರು ಇಂಟರ್ನ್ಯಾಷನಲ್ ಬ್ಯಾಂಕ್‌ನಲ್ಲಿ ಉದ್ಯೋಗಿ ಎನ್ನಲಾಗಿದೆ ಮತ್ತು ಸೈಕ್ಲಿಸ್ಟ್, ಬೈಕರ್, ರನ್ನರ್ ಕೂಡ ಹೌದು ಎಂದು ಹೇಳಲಾಗುತ್ತದೆ.
Tags:
ಸಿನಿಮಾ
