ಕಿಚ್ಚ ಸುದೀಪ್ ಅವರ ಜನ್ಮ ದಿನಕ್ಕೆ ಬಿಲ್ಲಾ ರಂಗ ಬಾಷಾ ಘೋಷಣೆ

 



ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನ್ಮ ದಿನಕ್ಕೆ ಸೆಪ್ಟೆಂಬರ್ 2 ರಂದು ಸುದೀಪ್ ಅಭಿನಯದ 'ಬಿಲ್ಲಾ ರಂಗ ಬಾಷಾ' ಸಿನಿಮಾದ ತುಣುಕು ಬಿಡುಗಡೆಯಾಗಲಿದೆ.

ಸುದೀಪ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವುದು ಖುಷಿಯಾಗುತ್ತಿದೆ, ಸೆಪ್ಟೆಂಬರ್ 2 ರಂದು ಬೆಳಿಗ್ಗೆ 10 ಗಂಟೆಗೆ ಸಿಗೋಣ ಎಂದು ಅನೂಪ್ ಭಂಡಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು.

ಈ ಮೊದಲು ಸುದೀಪ್ ಮತ್ತು ಅನೂಪ್ ಭಂಡಾರಿ ಜೋಡಿಯ 'ವಿಕ್ರಾಂತ್ ರೋಣ' ಸಿನಿಮಾ ತೆರೆಗೆ ಬಂದಿತ್ತು ಮತ್ತೆ ಈ ಜೋಡಿಯ ಮತ್ತೊಂದು ಸಿನಿಮಾ ತೆರೆಗೆ ಬರಲಿದೆ. ಸುದೀಪ್ ಅವರ 46ನೇ ಸಿನಿಮಾ 'ಮ್ಯಾಕ್ಸ್' ಶೀಘ್ರದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು